ಮೂಡುಬಿದಿರೆ:ಕೆ.ಪಿ.ಎಸ್ ಮಿಜಾರು ಪ್ರಾಥಮಿಕ ಶಾಲೆಯಲ್ಲಿ ರಮಣ ಟ್ರಸ್ಟ್ ಸಂಸ್ಥೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಉತ್ತೇಜಿಸುವ ಉದ್ದೇಶದಿಂದ ಯೋಗ ಪ್ರಾಣ ವಿದ್ಯೆಯ ತಂತ್ರಗಳನ್ನು ಪರಿಚಯಿಸುವ ಕಾರ್ಯಾಗಾರವನ್ನು ದಿನಾಂಕ ಮಂಗಳವಾರ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಮಿತಾ ವಿದ್ಯಾರ್ಥಿಗಳಿಗೆ ಯೋಗ ಪ್ರಾಣ ವಿದ್ಯೆಯ ವಿವಿಧ ತಂತ್ರಗಳ ಕುರಿತು ತರಬೇತಿ ನೀಡಿದರು.
ಕಾರ್ಯಾಗಾರವು ವಿದ್ಯಾರ್ಥಿಗಳ ನೆನಪಿನ ಶಕ್ತಿಯನ್ನು ಹೆಚ್ಚಿಸಲು, ಏಕಾಗ್ರತೆಯನ್ನು ವೃದ್ಧಿಸಲು, ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಶಿಸ್ತುಬದ್ಧ ಜೀವನ ನಡೆಸಲು ಹಾಗೂ ಕ್ಷಮಾಪಣೆ ಗುಣವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವ ತಂತ್ರಗಳ ಬಗ್ಗೆ ಮಾರ್ಗದರ್ಶನ ನೀಡಿತು.
ಮುಖ್ಯ ಶಿಕ್ಷಕಿ ನಾಗರತ್ನ ಶಿರೂರು, ಶಿಕ್ಷಕಿಯರಾದ ಗೀತಾ ಪ್ರೇಮ, ಹೇಮಾವತಿ ಉಪಸ್ಥಿತರಿದ್ದರು.


