ಗದರಿಸುವ ಶೈಲಿಯಲ್ಲಿ ರೀಲ್ಸ್ ಮಾಡುತ್ತಿದ್ದ ಆಶಾ ಪಂಡಿತ್ ನಿಧನ

BIDIRE NEWS

ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ವಿಭಿನ್ನ ಶೈಲಿಯ ರೀಲ್ಸ್‌ಗಳ ಮೂಲಕ ಜನಪ್ರಿಯತೆ ಗಳಿಸಿದ್ದ ನಾಗುರಿ ನಿವಾಸಿ ಆಶಾ ಪಂಡಿತ್  ಅವರು ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.

ಗದರಿಸುವ ವಿಶಿಷ್ಟ ಮಾತಿನ ಶೈಲಿಯ ರೀಲ್ಸ್‌ಗಳ ಮೂಲಕ ಆಶಾ ಪಂಡಿತ್ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಗಮನ ಸೆಳೆದಿದ್ದರು. ಪಡೀಲ್ ಸಮೀಪ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದ ಅವರು ಸರಳ ಜೀವನ ನಡೆಸುತ್ತಿದ್ದರು.

ಕುಟುಂಬ ಮೂಲಗಳ ಮಾಹಿತಿ ಪ್ರಕಾರ, ಗುರುವಾರ ರಾತ್ರಿ ಆಶಾ ಪಂಡಿತ್ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡು ವಾಂತಿ ಆಗಿತ್ತು. ಶುಕ್ರವಾರ ಮುಂಜಾನೆ ಮನೆ ಅಂಗಳದಲ್ಲಿ ಅಚಾನಕ್ ಕುಸಿದುಬಿದ್ದ ಅವರು ಹೃದಯಾಘಾತಕ್ಕೆ ಒಳಗಾದರು ಎನ್ನಲಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಆಶಾ ಪಂಡಿತ್ ಅವರ ಅಕಾಲಿಕ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಸಂತಾಪ ಸೂಚಿಸಿದ್ದು, ಅಭಿಮಾನಿಗಳು ಹಾಗೂ ಸ್ಥಳೀಯರು ಶೋಕ ವ್ಯಕ್ತಪಡಿಸಿದ್ದಾರೆ.

slider