ಬೆದ್ರ ಕಂಬಳದಲ್ಲಿ ವೇಷಧಾರಣೆ: ಅನಾರೋಗ್ಯ ಪೀಡಿತರ ನೆರವಿಗೆ ನೇತಾಜಿ ಬ್ರಿಗೇಡ್ ಹೆಜ್ಜೆ

BIDIRE NEWS
ಮೂಡುಬಿದಿರೆ: 23ನೇ ವರ್ಷದ ಕೋಟಿ–ಚೆನ್ನಯ ಮೂಡುಬಿದಿರೆ ಜೋಡುಕರೆ ಕಂಬಳದ ಪ್ರಯುಕ್ತ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ನೇತಾಜಿ ಬ್ರಿಗೇಡ್ ಮೂಡುಬಿದಿರೆ ವತಿಯಿಂದ 22ನೇ ಸೇವಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಸೇವಾ ಯೋಜನೆಯಡಿ ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರು ಅಗತ್ಯವಿರುವ ವ್ಯಕ್ತಿಗಳ ಚಿಕಿತ್ಸಾ ವೆಚ್ಚಕ್ಕಾಗಿ ಸಾರ್ವಜನಿಕರಿಂದ ನೆರವು ಸಂಗ್ರಹಿಸುವ ಉದ್ದೇಶವನ್ನು ಸಂಘಟನೆಯು ಹೊಂದಿದೆ.



ಮೂಡುಬಿದಿರೆ ಕೊಡಂಗಲ್ಲು ನಿವಾಸಿ ಅದ್ವಿತ್ ಡಿ. ದೇವಾಡಿಗ (9) ಬಾಲಕ ಜನ್ಮಜಾತವಾಗಿ ಮಾತನಾಡಲು ಸಾಧ್ಯವಾಗದೆ ಹಾಗೂ ಕಿವಿ ಕೇಳಿಸದ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯಕೀಯ ಚಿಕಿತ್ಸೆ ಮತ್ತು ಪುನರ್ವಸತಿ ಚಿಕಿತ್ಸೆಗೆ ಭಾರೀ ವೆಚ್ಚ ಅಗತ್ಯವಾಗಿದೆ.
ಇದೇ ವೇಳೆ ಮೂಡುಬಿದಿರೆ ಪುತ್ತಿಗೆ ಗ್ರಾಮದ ನಿವಾಸಿ ಅಕ್ಷತಾ ಕುಮಾರಿ (35) ಅವರು ಕಿಡ್ನಿ ವೈಫಲ್ಯ ಸೇರಿದಂತೆ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದು, ನಿರಂತರ ಡಯಾಲಿಸಿಸ್ ಹಾಗೂ ಚಿಕಿತ್ಸೆಗೆ ಆರ್ಥಿಕ ನೆರವು ಅತ್ಯವಶ್ಯಕವಾಗಿದೆ.
ಈ ಹಿನ್ನೆಲೆಯಲ್ಲಿ ನೇತಾಜಿ ಬ್ರಿಗೇಡ್ ಕಾರ್ಯಕರ್ತರು ವಿಶೇಷ ವೇಷಧಾರಣೆಯೊಂದಿಗೆ ಮೂಡುಬಿದಿರೆ ನಗರ ಪ್ರದೇಶ ಹಾಗೂ ಕೋಟಿ–ಚೆನ್ನಯ ಜೋಡುಕರೆ ಕಂಬಳದ ಸ್ಥಳದಲ್ಲಿ ದೇಣಿಗೆ ಸಂಗ್ರಹ ಕಾರ್ಯವನ್ನು ಕೈಗೊಳ್ಳಲಿದ್ದಾರೆ.
slider