ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಉತ್ಸವ ನಡೆಯಿತು.
ಬೆಳಗ್ಗೆ ತೋರಣ ಮಹೂರ್ತ, ವಿಮಾನ ಶುದ್ಧಿ, ಕ್ಷೇತ್ರಪಾಲ ಪೂಜೆ, ನಾಗದೇವರ ಪೂಜೆ, ಕುಷ್ಮಾಂಡಿನೀ ದೇವಿ ಹಾಗೂ ಭೈರವೀ ಪದ್ಮಾವತಿ ದೇವಿಯ ಶೋಡಶೋಪಚಾರ ಪೂಜೆಗಳು ನೆರವೇರಿದವು.
ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಲಕ್ಷ ಹೂವಿನ ವಿಶೇಷ ಪೂಜೆ ನಡೆಯಿತು. ಬಳಿಕ ದೇವರ ಉತ್ಸವ ಮತ್ತು ಭಗವಾನ್ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕ ನೆರವೇರಿತು.
ಪ್ರಥಮ ಕಲಶಕ್ಕೆ ಸ್ವಾಮೀಜಿ ಚಾಲನೆ ನೀಡಿದರು. ಭುಜಬಲಿ ಧರ್ಮಸ್ಥಳದ ಸಂಜಯತ ಕುಮಾರ್ ಶೆಟ್ಟಿ ಜಲಾಭಿಷೇಕ ನೆರವೇರಿಸಿದರು.
ಎಳನೀರು ಅಭಿಷೇಕವನ್ನು ಚಕ್ರೇಶ್ವರಿ ಜೈನ ಮಹಿಳಾ ಸಮಾಜ ಬೆಂಗಳೂರು, ಇಕ್ಷುರಸ ಅಭಿಷೇಕವನ್ನು ಪ್ರಶಾಂತ್ ಹೆಗ್ಡೆ ನಿಟ್ಟೆ, ದಮ್ಮಣ್ಣ ಹಾಗೂ ಡಾ. ಸುದೀಪ್ ಸಿದ್ದಕಟ್ಟೆ, ಧಾನ್ಯಾಭಿಷೇಕ, ಕ್ಷೀರಾಭಿಷೇಕವನ್ನು ಧನಂಜಯ, ಸಪ್ನಾ ಆಳ್ವಾ ಅಳಿಯೂರು ನೆರವೇರಿಸಿದರು. ಚತುಷ್ಕೋಣ ಅಭಿಷೇಕವನ್ನು ಶ್ರೀಕಾಂತ್ ಪಾಂಡಿ ಬೆಂಗಳೂರು, ಕಲ್ಕ ಚೂರ್ಣ ಅಭಿಷೇಕವನ್ನು ಲಲಿತಮ್ಮ ಹಾಗೂ ದನಕೀರ್ತಿ ಬಲಿಪ ಹಂಡೇಲು ಗುತ್ತು ಅಭಿಷೇಕವನ್ನು ನೇಮಿರಾಜ್ ಜೈನ್ ಬೈಲಾರೆ ನೆರವೇರಿಸಿದರು.
ಅರಶಿಣ ಹುಡಿ ಅಭಿಷೇಕವನ್ನು ಉದಯಕುಮಾರ್ ಸುಮ್ಮಗುತ್ತು, ಕಾಶ್ಮೀರ ಕೇಸರಿ ಅಭಿಷೇಕವನ್ನು ನಾರಾವಿ ವಿನಯ್ ಹೆಗ್ಡೆ ಹೊಸಬೆಟ್ಟು ಕುಟುಂಬ, ಸರ್ವಔಷಧಿ ಅಭಿಷೇಕವನ್ನು ಚಂದ್ರಪ್ರಭುಶೋಭಾ ಜೈನ್ ನೆರವೇರಿಸಿದರು.ಕಷಾಯ ಅಭಿಷೇಕ, ಬಿಳಿ ಚಂದನ ಅಭಿಷೇಕವನ್ನು ಅರ್ವ ಸಂದೀಪ್ ಇಂಜಿನಿಯರ್, ಶ್ರೀಗಂಧ ಅಭಿಷೇಕವನ್ನು ಪದ್ಮಪ್ರಸಾದ್ ಹೆಗ್ಡೆ, ರಕ್ತಚಂದನ ಅಭಿಷೇಕವನ್ನು ಚಾಮರಾಜನಗರದ ಗೋವಿಂದರಾಜ್ ಶಿವರಾಜ್ ಸಹೋದರರು ನೆರವೇರಿಸಿದರು. ಅಷ್ಟಗಂಧ ಅಭಿಷೇಕವನ್ನು ವಿನಂತಿ ಹೆಗ್ಡೆ ಮುಂಬೈ, ಸುಗಂಧ ಕಲಶವನ್ನು ಬಾಹುಬಲಿ ಪ್ರಸಾದ್ ಹಾಗೂ ಮನ್ಮಥ ಕುಮಾರ್ ನೆಲ್ಲಿಕಾರು ನೆರವೇರಿಸಿದರು. ಬಳಿಕ ಕನಕ ವೃಷ್ಟಿ, ಪುಷ್ಪ ವೃಷ್ಟಿ, ಪುಷ್ಪಮಾಲೆ ಮತ್ತು ಸನಿಹ ಸೇವೆಗಳು ನಡೆದವು. ಅಂತಿಮವಾಗಿ ಮಹಾಶಾಂತಿಧಾರ ಹಾಗೂ ಮಹಾಮಂಗಳ ಆರತಿಯೊಂದಿಗೆ ಕಾರ್ಯಕ್ರಮ ಭಕ್ತಿಪೂರ್ಣವಾಗಿ ಸಮಾಪ್ತಿಗೊಂಡಿತು.
ಮಂಗಳೂರು ಜೈನ್ ಮಿಲನ್ ಅಧ್ಯಕ್ಷ ರತ್ನಾಕರ ಜೈನ್ , ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಮವೈ.ಎನ್. ರಾಜೇಂದ್ರ ಕುಮಾರ್, ಪುಷ್ಪರಾಜ್ ಜೈನ್, , ಸುಮ್ಮ ಪ್ರಮೋದ್ ಹೆಗ್ಡೆ, ಟ್ರಸ್ಟಿ ವೀರಂ ಜಯ, ದನಕೀರ್ತಿ ಬಲಿಪ, ರಾಜೇಂದ್ರ ಬಲ್ಲಾಳ್, ರವಿ ವರ್ಮಾ ಜೈನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗಶ್ರೀ ಮುಪ್ಪಾನೆ ಹಾಗೂ ಆಮಂತ್ರಣ ಬಳಗದ ವಿಜಯಕುಮಾರ್ ಅವರನ್ನು ಸ್ವಾಮೀಜಿಗಳು ಸನ್ಮಾನಪತ್ರ ನೀಡಿ ಗೌರವಿಸಿ ಆಶೀರ್ವದಿಸಿದರು.


