ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್ ವಾರ್ಷಿಕ ಹಬ್ಬ: ಪರಮ ಪವಿತ್ರ ಪ್ರಸಾದ ಮೆರವಣಿಗೆ

BIDIRE NEWS

ಮೂಡುಬಿದಿರೆ : ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್‌ನ ವಾರ್ಷಿಕ ಹಬ್ಬದ ಅಂಗವಾಗಿ 'ಪರಮ ಪವಿತ್ರ ಪ್ರಸಾದ ಮೆರವಣಿಗೆ'ಯು ಭಾನುವಾರ ಭಕ್ತಿ-ಶ್ರದ್ಧೆಯಿಂದ ಜರುಗಿತು.



ಹಬ್ಬದ ಪ್ರಯುಕ್ತ ನಡೆದ ಪವಿತ್ರ ಬಲಿಪೂಜೆಯ ನೇತೃತ್ವವನ್ನು ಪದವು ಕಾಲೇಜಿನ ಪ್ರಾಂಶುಪಾಲ ವಂದನೀಯ ಅರುಣ್ ವಿಲ್ಸನ್ ಲೋಬೋ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಶಿರ್ತಾಡಿ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಹೆರೋಲ್ಡ್ ಮಸ್ಕರೇನಸ್, ವಂದನೀಯ ಜೋಸ್ಲಿ ಡಿಸಿಲ್ವ, ವಂದನೀಯ ಪೀಟರ್ ಪಿಂಟೋ ಉಪಸ್ಥಿತರಿದ್ದರು.

ಬಲಿಪೂಜೆಯ ನಂತರ ಪರಮ ಪವಿತ್ರ ಪ್ರಸಾದದ ಭವ್ಯ ಮೆರವಣಿಗೆಯು ಶಿರ್ತಾಡಿ ಪೇಟೆಯ ಪ್ರಮುಖ ರಸ್ತೆಗಳಲ್ಲಿ ಸಾಗಿ ಚರ್ಚ್ ಆವರಣದಲ್ಲಿ ಭಕ್ತಿಪೂರ್ವಕವಾಗಿ ಮುಕ್ತಾಯಗೊಂಡಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ಶ್ರದ್ಧೆ ಸಮರ್ಪಿಸಿದರು.

slider