ಮಂಗಳೂರು: ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಆರದಿರಲಿ ಬದುಕು ಆರಾಧನ' ತಂಡವು ತನ್ನ 105ನೇ ಯೋಜನೆಯ ಭಾಗವಾಗಿ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕುಟುಂಬವೊಂದಕ್ಕೆ ಡಿಸೆಂಬರ್ ತಿಂಗಳ ಸಹಾಯ ಹಸ್ತವನ್ನು ನೀಡಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಪೆರ್ಲ ರೋಡ್ ನಿವಾಸಿಯಾದ ಮೋಹನ್ ಎಂಬುವವರು ಕಳೆದ ಕೆಲವು ಸಮಯದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಪ್ರಸ್ತುತ ಅವರು ಮಂಗಳೂರಿನ 'ಮಂಗಳ ಕಿಡ್ನಿ ಆಸ್ಪತ್ರೆ'ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬಡತನದಲ್ಲಿದ್ದು, ಚಿಕಿತ್ಸಾ ವೆಚ್ಚವನ್ನು ಭರಿಸಲು ಅಸಹಾಯಕರಾಗಿದ್ದರು. ಕಷ್ಟದ ಪರಿಸ್ಥಿತಿಯನ್ನು ಅರಿತ ತಂಡವು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಸಹಾಯ ಹಸ್ತ ನೀಡುವ ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ, ದೀನ್ ರಾಜ್ ಕೆ., ಬಸವರಾಜ ಮಂತ್ರಿ, ಮಲ್ಲಿಕಾ ಸುಕೇಶ್ ಹಾಗೂ ಸದಸ್ಯರಾದ ಅಭಿಷೇಕ್ ಶೆಟ್ಟಿ ಐಕಳ, ಗಣೇಶ್ ಪೈ, ಭಾಸ್ಕರ ದೇವಾಡಿಗ, ಡಾ. ನಾಗರಾಜ ಶೆಟ್ಟಿ ಅಂಬೂರಿ, ಧನಂಜಯ ಶೆಟ್ಟಿ, ನಿಲೇಶ್ ಕಟೀಲು, ಪ್ರವೀಣ್ ಬಂಗೇರ, ಶ್ರೀಕಾಂತ ಭಟ್ ಪೊನ್ನಗಿರಿ, ಪ್ರಭಾಕರ್ ಮಂಗಳೂರು, ದಯಾನಂದ ಮಡ್ಕೇಕರ್, ಭೀಮಯ್ಯ ಸುಳ್ಯ, ಅಗರಿ ರಾಘವೇಂದ್ರ ರಾವ್, ಭಾಸ್ಕರ ದೇವಸ್ಯ, ದಿನೇಶ್ ಸಿದ್ದಕಟ್ಟೆ, ನಾಗರಾಜ ಸಾಲ್ಯನ್, ಶಾರದಾ ಅಂಚನ್ ಹಾಗೂ ರಂಗನಾಥ್ ರಾವ್ ಪಕ್ಷಿಕೆರೆ ಉಪಸ್ಥಿತರಿದ್ದರು.

