ಮೂಡುಬಿದಿರೆ: ಕೊಲ್ಕತ್ತಾದಲ್ಲಿ 3.96 ಕೋಟಿ ರೂ. ಮೊತ್ತದ ಟೆಂಡರ್ ಪಡೆಯಲು ಸುಳ್ಳು ದಾಖಲೆ ಸೃಷ್ಟಿಸಲಾಗಿದೆ ಎಂಬ ಆರೋಪ ಸಂಬಂಧ, ಕಿನ್ನಿಗೋಳಿಯ ಲೈಟಿಂಗ್ ಕಂಪೆನಿ ಹಾಗೂ ಅದರ ನಿರ್ದೇಶಕರ ವಿರುದ್ಧ ತನಿಖೆಗೆ ಮೂಡುಬಿದಿರೆ ಜೆಎಂಎಫ್ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.
ಆರ್‌ಟಿಐ ಆಕ್ಟಿವಿಸ್ಟ್ ಫಾರ್ ಜಸ್ಟೀಸ್ ಸಂಸ್ಥೆಯು ಸಲ್ಲಿಸಿದ್ದ ಖಾಸಗಿ ದೂರಿನ ಮೇರೆಗೆ ಪ್ರಕರಣವನ್ನು ಪರಿಗಣಿಸಿದ ನ್ಯಾಯಾಲಯ, ಮೇಲ್ನೋಟಕ್ಕೆ ತಪ್ಪುಗಳು ಕಂಡುಬಂದಿವೆ ಎಂದು ಹೇಳಿದೆ. ಆದರೆ ಐಎಎಸ್ ಅಧಿಕಾರಿಯ ವಿರುದ್ಧ ಸಲ್ಲಿಸಲಾದ ಸಾಕ್ಷ್ಯ ಪರ್ಯಾಪ್ತವಿಲ್ಲವೆಂದು ತಿಳಿಸಿ ಅವರ ಮೇಲಿನ ತನಿಖೆಗೆ ಕೋರ್ಟ್ ಒಪ್ಪಿಗೆ ನೀಡಿಲ್ಲ.
ಪ್ರಕರಣ ಸಂಬಂಧ ಸಂಸ್ಥೆಯ ನಿರ್ದೇಶಕರಿಗೆ ಸಮನ್ಸ್ ಜಾರಿಗೊಳಿಸಲಾಗಿದ್ದು, ಮುಂದಿನ ವಿಚಾರಣೆ 2026ರ ಮಾರ್ಚ್ 10ರಂದು ನಡೆಯಲಿದೆ.

