ಮೂಡುಬಿದಿರೆ: ಇಲ್ಲಿನ ಜೈನ್ ಕಾಲೇಜಿನ ಇಕೋ ಕ್ಲಬ್ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮಾದರಿ ಕಾರ್ಯವೊಂದನ್ನು ಕೈಗೊಂಡಿದ್ದಾರೆ. ಕಾಲೇಜಿನ ಇಕೋ ಕ್ಲಬ್ ವತಿಯಿಂದ ತಯಾರಿಸಲಾದ ಸುಮಾರು 3000 ಪೇಪರ್ ಕವರ್‌ಗಳನ್ನು ಹಾಗೂ ಸಂಗ್ರಹಿಸಿದ ಬಟ್ಟೆಗಳನ್ನು ಮೂಡುಬಿದಿರೆ ಪುರಸಭೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ವಿದ್ಯಾರ್ಥಿಗಳು ಹಳೆಯ ನ್ಯೂಸ್‌ಪೇಪರ್, ಪಾಂಪ್ಲೆಟ್ ಹಾಗೂ ಮ್ಯಾಗಜಿನ್ ಪೇಪರ್‌ಗಳನ್ನು ಬಳಸಿ ಈ ಕವರ್‌ಗಳನ್ನು ತಯಾರಿಸಿದ್ದಾರೆ. ವಿಶೇಷವೆಂದರೆ, ಇವುಗಳನ್ನು ತಯಾರಿಸಲು ಯಾವುದೇ ಸ್ಟೇಪ್ಲರ್ ಪಿನ್ ಅಥವಾ ಗಮ್ ಬಳಸದೆ ಪರಿಸರ ಸ್ನೇಹಿಯಾಗಿ ರೂಪಿಸಿದ್ದಾರೆ. ಮೂಡುಬಿದಿರೆ ಪುರಸಭೆಯ ವತಿಯಿಂದ ನಡೆಸಲ್ಪಡುವ 'ಶುಕ್ರವಾರ ಸಂತೆ' ಅಭಿಯಾನದ ಅಡಿಯಲ್ಲಿ ಬಟ್ಟೆ ಚೀಲಗಳನ್ನು ತಯಾರಿಸಲು ವಿದ್ಯಾರ್ಥಿಗಳು ಸಂಗ್ರಹಿಸಿದ ಹಳೆಯ ಬಟ್ಟೆಗಳನ್ನು ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾತ್ ಬಲ್ನಾಡ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು. ಪುರಸಭೆಯ ಪರವಾಗಿ ಕಮ್ಯುನಿಟಿ ಮೊಬಿಲೈಸರ್ ಚಂದ್ರಿಕಾ ಅವರು ಕವರ್‌ಗಳನ್ನು ಸ್ವೀಕರಿಸಿದರು.
ಇಕೋ ಕ್ಲಬ್‌ನ ಉಸ್ತುವಾರಿಗಳಾದ ಸಂಧ್ಯಾ ಮತ್ತು ಅಶ್ವಿನಿ, ಕ್ಲಬ್‌ನ ಕಾರ್ಯದರ್ಶಿ ನಿಖಿತಾ ಹಾಗೂ ಜಂಟಿ ಕಾರ್ಯದರ್ಶಿ ಅರ್ಪಿತ್ ಅಭಿಯಾನದ ನೇತೃತ್ವ ವಹಿಸಿದ್ದರು.

