ಮಹಿಳೆಗೆ ಲೈಂಗಿಕ ಕಿರುಕುಳ: ಅಂಗಡಿ ಮಾಲೀಕನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಮೂಡುಬಿದಿರೆ ಕೋರ್ಟ್

BIDIRE NEWS

ಮೂಡುಬಿದಿರೆ: ಗ್ರಾಹಕಿಯಾಗಿ ಬಂದ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಮೂಡುಬಿದಿರೆ ನ್ಯಾಯಾಲಯವು ಆರೋಪಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.


ಪ್ರಕರಣದ ಹಿನ್ನೆಲೆ

ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗ್ರಾಮದ ಜೋಡುಬೈಲು ನಿವಾಸಿ ಸಂಶುದ್ದೀನ್ ಶಿಕ್ಷೆಗೆ ಒಳಗಾದ ಅಪರಾಧಿ. ಈತ ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿ ಪಾದರಕ್ಷೆ ಅಂಗಡಿಯನ್ನು ನಡೆಸುತ್ತಿದ್ದನು. 2021ರ ಡಿಸೆಂಬರ್‌ನಲ್ಲಿ ಮಹಿಳೆಯೊಬ್ಬರು ಚಪ್ಪಲಿ ಖರೀದಿಸಲು ಇವನ ಅಂಗಡಿಗೆ ಬಂದಿದ್ದರು. ಮಧ್ಯಾಹ್ನ ಸುಮಾರು 12:20ರ ಸುಮಾರಿಗೆ ಚಪ್ಪಲಿ ತೋರಿಸುವ ನೆಪದಲ್ಲಿ ಮಹಿಳೆಯನ್ನು ಅಂಗಡಿಯ ಕಂಪಾರ್ಟ್‌ಮೆಂಟ್ ಒಳಗೆ ಕರೆದೊಯ್ದ ಸಂಶುದ್ದೀನ್, ಆಕೆಯ ಭುಜ ಮುಟ್ಟಿ, ಲೈಂಗಿಕವಾಗಿ ಕಿರುಕುಳ ನೀಡಿದ್ದಲ್ಲದೆ ಬಟ್ಟೆ ಕಳಚುವಂತೆ ಒತ್ತಾಯಿಸಿ ಅಸಭ್ಯವಾಗಿ ವರ್ತಿಸಿದ್ದನು.


ನ್ಯಾಯಾಲಯದ ತೀರ್ಪು:

ಈ ಘಟನೆಯ ಕುರಿತು ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪಿಎಸ್‌ಐ ವಿನಾಯಕ ತೊರಗಲ್ ಅವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮೂಡುಬಿದಿರೆ ನ್ಯಾಯಾಲಯವು, ಸಾಕ್ಷ್ಯಧಾರಗಳ ಆಧಾರದ ಮೇಲೆ ಸಂಶುದ್ದೀನ್ ದೋಷಿ ಎಂದು ತೀರ್ಮಾನಿಸಿತು.ಈ ತನಿಖಾ ತಂಡದಲ್ಲಿ ಎಎಸ್‌ಐ ಸಂಜೀವ ಎ.ಪಿ. ಅವರು ಸಹಕರಿಸಿದ್ದರು. 

slider