ಮೂಡುಬಿದಿರೆ: ಅಲಂಗಾರುದಲ್ಲಿರುವ ಶ್ರೀ ಜಗದ್ಗುರು ಅಯ್ಯ ಸ್ವಾಮೀ ಮಠದಲ್ಲಿ ಗುರುವಾರ ಭಕ್ತಿಭಾವದಿಂದ ಸಹಸ್ರ ಮೃತ್ಯುಂಜಯ ಹೋಮ ಜರಗಿತು.
ನವಕಲಾಹೋಮ, ಕಲಶಾಭಿಷೇಕ, ನವಗ್ರಹ ಹೋಮ ಸೇರಿದಂತೆ ಸಹಸ್ರ ಮೃತ್ಯುಂಜಯ ಯಜ್ಞವು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಮಧ್ಯಾಹ್ನ ಮಹಾಪೂಜೆ, ಪೂರ್ಣಾಹುತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ 5 ಗಂಟೆಗೆ ಭಜನಾ ಕಾರ್ಯಕ್ರಮ ಆರಂಭಗೊಂಡು ಮರುದಿನ ಸೂರ್ಯೋದಯದವರೆಗೆ ನಡೆಯಿತು.
ಶುಕ್ರವಾರ ಬೆಳಿಗ್ಗೆ ಸೂರ್ಯೋದಯಕ್ಕೆ ಭಜನಾ ಮಂಗಳ ನಡೆಯಲಿದೆ. ಬಳಿಕ ಬೆಳಿಗ್ಗೆ 10 ಗಂಟೆಗೆ ಶ್ರೀ ಗುರುಮಠದಿಂದ ಕಾಳಿಕಾಂಬಾ ದೇವಸ್ಥಾನಕ್ಕೆ ಸಂದರ್ಶನವುದೆ, ಅಲ್ಲಿ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಜರುಗಿತು. ನಂತರ ಶ್ರೀ ಗುರುಮಠಕ್ಕೆ ಪುನರಾಗಮನಗೊಂಡು ಮಹಾಪೂಜೆ, ಪ್ರಸಾದ ವಿತರಣೆಯಿದೆ.

