ಮೂಡುಬಿದಿರೆ: ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸುವುದೇ ಫೋರಂಗಳ ಮುಖ್ಯ ಉದ್ದೇಶವಾಗಿದ್ದು, ಇವು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಂವಹನ ಕೌಶಲ್ಯ, ಸಂಘಟನಾ ಸಾಮರ್ಥ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತª.ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ಕಾಲೇಜು ಫೋರಂಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಹೇಳಿದರು.
ಆಳ್ವಾಸ್ ಪದವಿ ಸ್ವಾಯತ್ತ ಕಾಲೇಜಿನ 22 ಅಂತರ ಫೋರಂಗಳ ವಾರ್ಷಿಕ ಸ್ಪರ್ಧೆ ಇನಾಮು 2026 ಅನ್ನು ಉದ್ಘಾಟಿಸಿ ಮಾತನಾಡಿದರು. 22 ವಿಭಿನ್ನ ಫೋರಂಗಳನ್ನು ಹೊಂದಿರುವ ಆಳ್ವಾಸ್ ಸ್ವಾಯತ್ತ ಕಾಲೇಜು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ವಿಶಾಲ ಅವಕಾಶ ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಫೋರಂಗಳ ಮುಖ್ಯ ಸಂಯೋಜಕ ಡಾ. ಯೋಗೀಶ್ ಕೈರೋಡಿ, ಇನಾಮು ಕಾರ್ಯಕ್ರಮದ ಸಂಯೋಜಕ ಮನು ಡಿ.ಎಲ್., ಕೋರ್ ಕಮಿಟಿಯ ವಿದ್ಯಾರ್ಥಿ ಸಂಯೋಜಕ ನಿರ್ಮಲ್ ಪೈ ಉಪಸ್ಥಿತರಿದ್ದರು.
ರಶ್ಮಿ ಸ್ವಾಗತಿಸಿದರು. ಪ್ರಥ್ವಿತಾ ನಿರೂಪಿಸಿದರು. ಶ್ರಾವ್ಯ ಶೆಟ್ಟಿ ವಂದಿಸಿದರು.
ಫೆ. 2ರಿಂದ ಮಾ. 20ರವರೆಗೆ ಸ್ಪರ್ಧೆಗಳು:
ಫೆಬ್ರವರಿ 2ರಿಂದ ಮಾರ್ಚ್ 20ರವರೆಗೆ ಮಾಡೆಲ್ ಮೇಕಿಂಗ್, ಪೋಸ್ಟರ್ ಮೇಕಿಂಗ್, ಕಟ್ ಔಟ್ ಅನಿಮೇಶನ್, ಸ್ಪೆಲ್‌ಮೇನಿಯಾ, ಬಾಟಲ್ ಪೈಂಟಿAಗ್, ಮೈಂಡ್ ಮಾರ್ಕೆಟಿಂಗ್, ನವರಸ, ಸ್ಕಿಟ್, ಕೇಸ್ ಕ್ವೆಸ್ಟ್, ಮೆಲೋಡಿ ವಿತ್ ಎ ಮೆಸೇಜ್, ಕೇರ್ ಫಾರ್ ವಿಂಗ್ಸ್, ಡ್ಯಾನ್ಸ್ ವೆರೈಟಿ, ಫೋಕ್ ಗ್ರೂಪ್ ಸಾಂಗ್, ಕ್ಲೇ ಮಾಡೆಲಿಂಗ್, ಸಿಕ್ರೆಟ್ ಫ್ಲಿಟಿಕ್ಸ್, ಸ್ಕಲ್ಪ್ಚರ್ ಆರ್ಟ್, ಮೈಮ್ ಶೋ, ನಾಟ್ಯ ಸಂಗಮ, ಭಾಷಣ ಸ್ಪರ್ಧೆ, ಟಗ್ ಆಫ್ ವಾರ್, ಸೆಟ್‌ಅಪ್ ಪ್ಲಾನ್ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ.

