ಮೂಡುಬಿದಿರೆ:ಅಯೋಧ್ಯೆ ಶ್ರೀ ರಾಮೋತ್ಸವದ ಎರಡನೇ ವರ್ಷದ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇರುವೈಲು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಇರುವೈಲು ಹಾಗೂ ಶ್ರೀ ರಾಮೋತ್ಸವ ಸಮಿತಿ ಇರುವೈಲು ಇವರ ಜಂಟಿ ಆಶ್ರಯದಲ್ಲಿ ಗುರುವಾರ ರಾತ್ರಿ ಭಜನಾ ಕಮ್ಮಟೋತ್ಸವ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಕಾರ್ಯಕ್ರಮಕ್ಕೆ ದೇವಾಲಯದ ಪ್ರಧಾನ ಅರ್ಚಕ ಐ. ರಾಘವೇಂದ್ರ ಆಸ್ರಣ್ಣ ಅವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.
ಭಜನಾ ಕಮ್ಮಟೋತ್ಸವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಇರುವೈಲು, ಶ್ರೀ ದುರ್ಗಾಪರಮೇಶ್ವರಿ ಕುಣಿತ ಭಜನಾ ಮಂಡಳಿ ಇರುವೈಲು, ವೀರ ಶಿವಾಜಿ ಭಜನಾ ಮಂಡಳಿ ಕಲ್ಲಾಡಿ ಹಾಗೂ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಪೂಪಾಡಿಕಲ್ಲು ತಂಡಗಳು ಭಜನಾ ಸೇವೆ ಸಲ್ಲಿಸಿ ಭಕ್ತರನ್ನು ಮಂತ್ರಮುಗ್ಧಗೊಳಿಸಿದವು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ನಾಗೇಶ್ ಅಮೀನ್, ಭಜನಾ ಮಂಡಳಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾರಾಯಣ ದೇವಾಡಿಗ, ಶ್ರೀ ರಾಮೋತ್ಸವ ಸಮಿತಿ ಸಂಚಾಲಕ ಪದ್ಮನಾಭ ಕುಲಾಲ್ ಶೆಟ್ಟಿಪದವು, ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶುಭಕರ ಕಾಜವ, ಶಿವಾನಂದ ನಾಯ್ಕ್, ಹೊಸಬೆಟ್ಟು ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಪೂಜಾರಿ ಕಾಳೂರು, ಪ್ರಮುಖರಾದ ದಿನೇಶ್ ಶೆಟ್ಟಿ ದೊಡ್ಡಗುತ್ತು ಸೇರಿದಂತೆ ಗ್ರಾಮಸ್ಥರು ಹಾಗೂ ಊರ–ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ: ನಿಶಾ ಇರುವೈಲು

