ರಾಜ್ಯ ಮಟ್ಟದ ಮಿನಿ ಒಲಿಂಪಿಕ್ಸ್‌: ಮೂಡುಬಿದಿರೆ ರೀಸ್ ಪಿಂಟೋಗೆ ಮೂರನೇ ಸ್ಥಾನ

BIDIRE NEWS

ಮೂಡುಬಿದಿರೆ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಗಳ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಮಿನಿ ಒಲಿಂಪಿಕ್ಸ್‌ನ ಬಾಕ್ಸಿಂಗ್ ಸ್ಪರ್ಧೆಯಲ್ಲಿ, ಮೂಡುಬಿದಿರೆಯ ರೀಸ್ ಪಿಂಟೋ ಮೂರನೇ ಸ್ಥಾನ ಪಡೆದಿದ್ದಾರೆ.

ಅಲಂಗಾರು ಸೈಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ರೀಸ್ ಪಿಂಟೋ  ಮೂಡುಬಿದಿರೆ ಪೊನ್ನೆಚ್ಚಾರಿ ನಿವಾಸಿಗಳಾದ ರಿಚರ್ಡ್ ಪಿಂಟೋ ಮತ್ತು ಗ್ರೇಟಾ ವಾಯ್ಲೆಟ್ ಪಿಂಟೋ ದಂಪತಿಯ ಪುತ್ರರಾಗಿದ್ದಾರೆ.

ಈ ಸಾಧನೆಗಾಗಿ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.

slider