ಮೂಡುಬಿದಿರೆ: ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ಕೊಡುಗೆಯಿಂದ ಲಯನ್ಸ್ ಕ್ಲಬ್ ಮೂಡುಬಿದಿರೆಯ ನೇತೃತ್ವದಲ್ಲಿ ಪೇಪರ್ ಮಿಲ್ಲ್ ಬಳಿ ನಿರ್ಮಾಣಗೊಂಡಿರುವ ಬಸ್ಸು ಪ್ರಯಾಣಿಕರ ತಂಗುದಾಣವನ್ನು ಲಯನ್ಸ್ ರಾಜ್ಯಪಾಲ ಕುಡ್ಪಿ ಅರವಿಂದ Shenoy ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, ಸಾಮಾಜಿಕ ಕಳಕಳಿಯನ್ನು ಹೊಂದಿರುವ ಮೂಡುಬಿದಿರೆಯ ಲಯನ್ಸ್ ಕ್ಲಬ್ ಜನರಿಗೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಇದೀಗ ಪ್ರೊವಿಟ್ ಫುಡ್ಸ್ ನ ವಿನ್ಸೆಂಟ್ ಅವರ ಸಹಕಾರದೊಂದಿಗೆ ನಿಮಾ9ಣವಾಗಿರುವ ತಂಗುದಾಣವನ್ನು ಇಲ್ಲಿನವರೇ ನಿಭಾಯಿಸಬೇಕೆಂದು ಸಲಹೆ ನೀಡಿದರು.
ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಆಡಳಿ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ ಮುಖ್ಯ ಅತಿಥಿಯಾಗಿ ಭಾಗವಹಿ, ತಮ್ಮ ಸಂಸ್ಥೆಯ ಮೂಲಕ ಮೂಡುಬಿದಿರೆ ತಾಲೂಕಿನ 300 ಜನರಿಗೆ ಉದ್ಯೋಗವನ್ನು ನೀಡಲಾಗಿದೆ. ಆದ್ಯತೆಯ ಮೇರೆಗೆ ಸ್ಪಂದಿಸಿ ಉತ್ತಮ ಕೆಲಸಗಳಿಗೆ ಸಿಆರ್‌ಎಫ್ ಪಂಡ್ ಅನ್ನು ಮಂಜೂರು ಮಾಡಲಾಗಿದೆ ಕರೆಂಟ್ ಮತ್ತು ನೀರಿನ ವ್ಯವಸ್ಥೆಯನ್ನು ಪುರಸಭೆ ಮಾಡಿ ಕೊಡುವಂತೆ ತಿಳಿಸಿದ ಅವರು ಆಟೋ ಪಾರ್ಕ್ ಇಂಟರ್ ಲಾಕ್ ಹಾಗೂ ತಮ್ಮ ಸಂಸ್ಥೆಯ ಬಳಿಯ ರಸ್ತೆಗೆ ಸೂಕ್ತ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆಯಿತ್ತರು.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ವಾರ್ಡ್ ಸದಸ್ಯ ಇಕ್ಬಾಲ್ ಕರೀಂ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಪೂರ್ವ ರಾಜ್ಯಪಾಲ ಕೆ.ಸಿ ಪ್ರಭು, ಪ್ರಾಂತ್ಯಾಧ್ಯಕ್ಷ ಜಗದೀಶ್ಚಂದ್ರ ಡಿ. ಕೆ, ವಲಯಾಧ್ಯಕ್ಷ, ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್, ನಿಕಟಪೂರ್ವ ಅಧ್ಯಕ್ಷ ಬೋನವೆಂಚರ್ ಮಿನೇಜಸ್, ಪೂರ್ವ ಅಧ್ಯಕ್ಷ ದಿನೇಶ್, ಮಾಜಿ ಪ್ರಾಂತ್ಯಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಉದ್ಯಮಿಗಳಾದ ಶ್ರೀಪತಿ ಭಟ್, ತಿಮ್ಮಯ್ಯ ಶೆಟ್ಟಿ, ಓಸ್ವಾಲ್ಡ್ ಡಿಕೋಸ್ತ, ಲಯನ್ಸ್ ಉಪಸ್ಥಿತರಿದ್ದರು. ವಂದಿಸಿದರು.

.jpg)
.jpg)