ಮೂಡುಬಿದಿರೆ: ಇಲ್ಲಿನ ಪೌರಕಾರ್ಮಿಕರ ಆರೋಗ್ಯದ ಕಾಳಜಿಯ ದೃಷ್ಟಿಯಿಂದ, ಪುರಸಭೆಯ ವತಿಯಿಂದ ಆಳ್ವಾಸ್ ಹೆಲ್ತ್ ಸೆಂಟರ್‌ನ ಸಹಯೋಗದೊಂದಿಗೆ ಪೌರಕಾರ್ಮಿಕರು ಹಾಗೂ ವಾಹನ ಚಾಲಕರಿಗಾಗಿ ವಿಶೇಷ ಕಣ್ಣಿನ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಪುರಸಭೆಯ ಕಚೇರಿಯ ನೆಲಮಾಳಿಗೆಯಲ್ಲಿ ಗುರುವಾರ ನಡೆದ ಶಿಬಿರದಲ್ಲಿ ಪುರಸಭೆ ಮುಖ್ಯಾಧಿಕಾರಿ: ಇಂದು ಎಂ., ಪರಿಸರ ಅಭಿಯಂತರೆ ಶಿಲ್ಪಾ ಎಸ್., ಹಿರಿಯ ಆರೋಗ್ಯ ನಿರೀಕ್ಷಕಿ ಶಶಿರೇಖಾ, ಆಳ್ವಾಸ್ ಹೆಲ್ತ್ ಸೆಂಟರ್‌ನ ಕಾರ್ಯನಿರ್ವಹಣಾಧಿಕಾರಿ ಡಾ. ಸಚಿನ್, ಆರೋಗ್ಯ ಸೇವೆಗಳ ವಿಭಾಗದ ಮುಖ್ಯಸ್ಥ ಉಮೇಶ್ ಗೌಡ, ವ್ಯವಸ್ಥಾಪಕ ಕ್ಯಾಮರೂನ್ ಮಥಾಯಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ಆಪ್ಟಿಕೋ ಪ್ರತಿನಿಧಿ ಶಾಹಿಕ್ ಮತ್ತು ಅವರ ತಂಡ, ಕಮ್ಯುನಿಟಿ ಮೊಬಿಲೈಸರ್‌ಗಳಾದ ಅನುಷಾ, ಅಮಿತಾ, ಚಂದ್ರಿಕಾ, ರಾಜೇಶ್ವರಿ, ಸೂಪರ್‌ವೈಸರ್ ವಿನಾಯಕ, ಸಾಹಸ ಎನ್‌ಜಿಓ ಸಿಬ್ಬಂದಿ ಶ್ರವಣ್ ಉಪಸ್ಥಿತರಿದ್ದರು.



