ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರ ಬಳಗದ ವತಿಯಿಂದ ಬಹುನಿರೀಕ್ಷಿತ 'ಸೆಕ್ಷನ್ 144' ಎಂಬ ವಿಭಿನ್ನ ಶೈಲಿಯ, ರೋಚಕ ಕಥಾಹಂದರದ ತುಳು ಹಾಸ್ಯಮಯ ಪತ್ತೆದಾರಿ ನಾಟಕವು ಮೂಡುಬಿದಿರೆಯ ಕನ್ನಡ ಭವನದಲ್ಲಿ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ. ನಾಟಕವು ನವೆಂಬರ್ 16, ಆದಿತ್ಯವಾರದಂದು ಸಂಜೆ 6:30 ಕ್ಕೆ ಮೂಡುಬಿದಿರೆಯ ಕನ್ನಡ ಭವನದಲ್ಲಿ ಪ್ರದರ್ಶನಗೊಳ್ಳಲಿದೆ.
'ಪ್ರಶಸ್ತಿ ವಿಜೇತ' ಕಲಾವಿದೆರನ್ನು ಒಳಗೊಂಡಿರುವ ಈ ನಾಟಕಕ್ಕೆ 'ರಂಗ ಸಾರಥಿ' ಪುರುಷೋತ್ತಮ ಕೊಯಿಲ ಅವರು ಸಾರಥ್ಯ ವಹಿಸಿ ನಿರ್ದೇಶನ ನೀಡಿದ್ದಾರೆ. ನಾಟಕದ ಕಥೆ ಮತ್ತು ಸಂಭಾಷಣೆಯನ್ನು ಸಂತೋಷ್ ಎಂ. ಪುಚ್ಚೇರ್ ಅವರು ಹೆಣೆದಿದ್ದಾರೆ.
'ತುಳುನಾಡ ತುಳುಶ್ರೀ' ಮತ್ತು 'ಅಭಿನಯ ಮಾಣಿಕ್ಯ' ಎಂಬ ಬಿರುದುಗಳನ್ನು ಪಡೆದಿರುವ ರಮಾ ಬಿ.ಸಿ. ರೋಡ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಶೈಲಿಯಲ್ಲಿ ಮೂಡಿಬಂದಿದೆ.
ನಾಟಕ ಪ್ರವೇಶವು ಉಚಿತವಾಗಿದೆ. ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತುಳು ರಂಗಭೂಮಿಯ ಈ ವಿಭಿನ್ನ ಪ್ರಯತ್ನವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಕೋರಿದ್ದಾರೆ.

