ಮಾನವೀಯತೆಗೆ ರಾಜಾಶ್ರಯ: 55 ವರ್ಷದ ಪೇಪರ್ ರಾಜಣ್ಣನಿಗೆ ಅನಿಲ್ ಮೆಂಡೋನ್ಸಾರಿಂದ ಸೂರು

BIDIRE NEWS

ಮೂಡುಬಿದಿರೆ: ಕಳೆದ 55 ವರ್ಷಗಳಿಂದ ಪೇಟೆಯಲ್ಲಿ ಮನೆ ಮನೆಗೆ ದಿನಪತ್ರಿಕೆ ಮತ್ತು ಹಾಲು ವಿತರಿಸುತ್ತಾ, 'ಪೇಪರ್ ರಾಜಣ್ಣ' ಎಂದೇ ಪ್ರಸಿದ್ಧರಾಗಿರುವ ವ್ಯಕ್ತಿ, ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಕಂಡಿದ್ದ ಸೂರು ಮತ್ತು ಭದ್ರವಾದ ಮನೆಯ ಕನಸು ನನಸಾಗಿದೆ.





ಕೇರ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ, ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಹಾಗೂ ಸಮಾಜ ಸೇವಕ ಅನಿಲ್ ರೋಚನ್ ಮೆಂಡೋನ್ಸಾ ಅವರು ರಾಜಣ್ಣನಿಗೆ ಸುಸಜ್ಜಿತ ಮನೆಯೊಂದನ್ನು ಕಟ್ಟಿಸಿಕೊಡುವ ಮೂಲಕ ಮಾನವೀಯ ಸೇವೆಗೆ ಮಾತ್ರವಲ್ಲದೆ, ಸೌಹಾರ್ದತೆಗೂ ಸಾಕ್ಷಿಯಾಗಿದ್ದಾರೆ.

'ರಾಜಾಶ್ರಯ'ಕ್ಕೆ ಗೃಹಪ್ರವೇಶ

ಪಡುಮಾರ್ನಾಡು ಗ್ರಾಮದ ಅಲಂಗಾರು ಬನ್ನಡ್ಕದಲ್ಲಿರುವ ರಾಜಣ್ಣನ ನಿವೇಶನದಲ್ಲಿ ನಿರ್ಮಿಸಲಾದ ಹೊಸ ಮನೆಯ ಗೃಹಪ್ರವೇಶ ಸಮಾರಂಭವು ಭಾನುವಾರ  ನಡೆಯಿತು.ಈ ಮೂಲಕ ಅನಿಲ್ ಮೆಂಡೋನ್ಸಾ ಅವರು ಒಟ್ಟು 9ನೇ ಮನೆಯನ್ನು ಕಟ್ಟಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಅಶಕ್ತರಿಗೆ ಶಕ್ತವಾದ ಹಾಗೂ ಭದ್ರವಾದ ಸೂರು ಒದಗಿಸುವ ತಮ್ಮ ಮಾನವೀಯ ಕಾರ್ಯವನ್ನು ಮುಂದುವರೆಸಿದ್ದಾರೆ. ಈ ಉದಾತ್ತ ಕಾರ್ಯದಲ್ಲಿ, ಅನೀಶ್ ಡಿಸೋಜ ಅವರು ಮನೆಯ ಇಲೆಕ್ಟ್ರಿಕ್ ವೈರಿಂಗ್ (ವಿದ್ಯುತ್ ಸಂಪರ್ಕ) ಕಾರ್ಯವನ್ನು ಉಚಿತವಾಗಿ ಮಾಡಿಕೊಡುವ ಮೂಲಕ ಅನಿಲ್ ಮೆಂಡೋನ್ಸಾ ಅವರ ಸೇವೆಗೆ ಕೈಜೋಡಿಸಿದ್ದಾರೆ. ಫರ್ನಾಂಡಿಸ್ ಗ್ರೂಪ್‌ನ ವಿಲ್ಸನ್ ಫರ್ನಾಂಡಿಸ್ , ಪುರಸಭೆ ಸದಸ್ಯ ಪಿ.ಕೆ. ಥೋಮಸ್

ಉದ್ಯಮಿ ಅಬು ಅಲಾ ಪುತ್ತಿಗೆ, ಯುವ ವಕೀಲೆ ಸುಚಿತಾ, ಬಿಜೆಪಿ ಮುಖಂಡ ಕೆ.ಪಿ. ಜಗದೀಶ್ ಅಧಿಕಾರಿ, ಮಂಗಳೂರಿನ ಮಂಗಳಮುಖಿ ಅನಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.


slider