ಮೂಡುಬಿದಿರೆ:ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮೂಡುಬಿದಿರೆ, ಆಟೋರಿಕ್ಷಾ ಮಾಲಕ–ಚಾಲಕರ ಸಂಘ ಮೂಡುಬಿದಿರೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಒನ್ ಸೈಟ್ ಎಸಿಲರ್ ಲಕ್ಸೋಟಿಕ್ ಫೌಂಡೇಶನ್ ಬೆಂಗಳೂರು ಹಾಗೂ ಡಾ. ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಅವರ ಸಂಯುಕ್ತ ಆಶ್ರಯದಲ್ಲಿ ಆಟೋ ಚಾಲಕ–ಮಾಲಕರಿಗೆ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ಮಂಗಳವಾರ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು.
ಪ್ರಸಾದ್ ನೇತ್ರಾಲಯದ ವತಿಯಿಂದ ಆಟೋ ಚಾಲಕ–ಮಾಲಕರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಿ, ಸುಮಾರು 85 ಮಂದಿ ಫಲಾನುಭವಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.
ಆಟೋ ಚಾಲಕ–ಮಾಲಕರ ಸಂಘದ ಗೌರವಾಧ್ಯಕ್ಷ, ವಕೀಲ ಶರತ್ ಡಿ. ಶೆಟ್ಟಿ ಪ್ರಸಾದ್ ನೇತ್ರಾಲಯ ಆಟೋ ಚಾಲಕ ಹಾಗೂ ಮಾಲಕರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣೆ ಮೂಲಕ ಸಮಾಜಮುಖಿ ಸೇವೆ ಸಲ್ಲಿಸಿರುವುದನ್ನು ಶ್ಲಾಘನೀಯ ಎಂದರು.
ಪ್ರಸಾದ್ ನೇತ್ರಾಲಯದ ನಿರ್ದೇಶಕಿ ಹಿರಿಯ ನೇತ್ರ ತಜ್ಞೆ ಡಾ. ಸ್ಮೃತಿ, ಆಟೋ ಚಾಲಕ–ಮಾಲಕರ ಸಂಘದ ಅಧ್ಯಕ್ಷ ದೀಪಕ್ ರಾಜ್ , ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.


