ಅಗರಿ ಎಂಟರ್‌ಪ್ರೈಸಸ್‌ ಹಬ್ಬ ಹಬ್ಬಗಳ ಉತ್ಸವ : ಸುರತ್ಕಲ್ ಶಾಖೆಯಲ್ಲಿ 9ನೇ ಹಂತದ ಎರಡನೇ ಡ್ರಾ

BIDIRE NEWS

ಮೂಡುಬಿದಿರೆ: ಅಗರಿ ಎಂಟರ್‌ಪ್ರೈಸಸ್‌ ವತಿಯಿಂದ ಆಯೋಜಿಸಲಾದ ಹಬ್ಬ ಹಬ್ಬಗಳ ಉತ್ಸವ ಪ್ರತಿದಿನ ಒಂದು ಬಹುಮಾನ, 100 ದಿನ 100 ಬಹುಮಾನ ಯೋಜನೆಯ 9ನೇ ಹಂತದ ಎರಡನೇ ಡ್ರಾ ಕಾರ್ಯಕ್ರಮ ಮಂಗಳವಾರ ಸುರತ್ಕಲ್ ಶಾಖೆಯಲ್ಲಿ ನಡೆಯಿತು.

ಎಮೆನ್ಸಿ ಡಿಸೈನ್ ಅಂಡ್ ಮಾರ್ಕೆಟಿಂಗ್‌ನ ಮುಕೇಶ್ ಕೋಟ್ಯಾನ್, ಬ್ಲೂ ಸ್ಟಾರ್ ಕಂಪನಿಯ ಎಎಸ್‌ಎಂ ಯೋಗೀಶ್, ಮಂಗಳೂರಿನ ಲಕ್ಷಿö್ಮÃದಾಸ್ ಜ್ಯುವೆಲ್ಲರ್ಸ್ ಮಾಲೀಕ ವಿಷ್ಣು ಆಚಾರ್ಯ, ಮಂಜುಶ್ರೀ ಸ್ಕಿಲ್ಸ್ ಕುಳಾಯಿ ಮಾಲಕಿ ಅನುಪಮಾ, ಕೃಷ್ಣಾಪುರದ ಗ್ರೋಸರಿ ಸ್ಟೋರ್‌ನ ಸಮದ್, ವಾಮಂಜೂರಿನ ಟೈಲರ್ ಫರ್ಜಾನ, ಕೋಟಕ್ ಮಹೇಂದ್ರ ಬ್ಯಾಂಕ್ ಲಿ., ಮಂಗಳೂರು ಶಾಖೆಯ ಸೀನಿಯರ್ ಮ್ಯಾನೇಜರ್ ತೇಜಸ್ವಿ ಕೆ., ಇನ್ ಗ್ಯಾಲರಿ ಕಾರ್ಪೊರೇಟ್ ಬಂಟ್ವಾಳದ ಮಾಲಕರಾದ ಆಲ್ವಿನ್ ಡಿಸೋಜ, 

ಹಿಂದೂ ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ, ಪ್ರಕಾಶ್ ಕುಳಾಯಿ ಮುಖ್ಯ ಅತಿಥಿಯಾಗಿದ್ದರು.

ಅಗರಿ ಎಂಟರ್‌ಪ್ರೈಸಸ್‌ ಮಾಲಕ ಅಗರಿ ರಾಘವೇಂದ್ರ ರಾವ್ ಅತಿಥಿಗಳನ್ನು ಗೌರವಿಸಿದರು. 

ಅಂತಾರಾಷ್ಟ್ರೀಯ ಮಟ್ಟದ ಮಿಸಸ್ ಅರ್ಥ್ ಇಂಟರ್ ನ್ಯಾಷನಲ್ ಸ್ಪರ್ಧೆಯ ಗ್ರಾಂಡ್ ವಿನ್ನರ್ ವಿದ್ಯಾ ಸಂಪತ್ ಚಿತ್ರಾಪುರ ಅವರನ್ನು ಸನ್ಮಾನಿಸಲಾಯಿತು. ಮೈಸೂರು ಮುಕ್ತ ವಿದ್ಯಾಲಯದ ಶಿಕ್ಷಣ ಶಾಸ್ತç (ಎಂ.ಎ.) ವಿಭಾಗದಲ್ಲಿ ಮೂರನೇ ರ‍್ಯಾಂಕ್ ಪಡೆದ ಅಶ್ವಿನಿ ಐತಾಳ್ ಹೊಸಬೆಟ್ಟು ಅವರನ್ನು ಅಭಿನಂದಿಸಲಾಯಿತು. 

ಕಳೆದ ಡ್ರಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಬ್ದುಲ್ ರಜಾಕ್ ಅವರಿಗೆ ಇಯರ್ ಬಡ್ಸ್, ಪ್ರೀತಮ್ ಅವರಿಗೆ ಎಂಎA ಸ್ಪೀಕರ್, ಶರತ್ ಕುಮಾರ್ ಅವರಿಗೆ ಸೀಲಿಂಗ್ ಫ್ಯಾನ್, ರಜನಿ ಅವರಿಗೆ ಫ್ಯಾನ್, ವೀರಜ್ ಚೆನ್ನಯ್ಯ ಅವರಿಗೆ ಹೇರ್ ಡ್ರೈಯರ್, ಗೀತಾ ಹಾಗೂ ಶಾಲಿನಿ ಅವರಿಗೆ ಹಾಟ್ ಬಾಕ್ಸ್, ಇಂದ್ರಜಿತ್ ರಾವ್ ದಿವಾನ ಜಯಲಕ್ಷ್ಮಿ ಅಬಾರ್ಯ ಅವರಿಗೆ ವಾಟರ್ ಪ್ಯೂರಿಫೈಯರ್, ಫರೂಕ್ ಅವರಿಗೆ ಕಾಪರ್ ಬಾಟಲ್, ಮಹಮ್ಮದ್ ಆಸಿಫ್ ಅವರಿಗೆ ಪೆಡೆಸ್ಟಲ್ ಫ್ಯಾನ್, ಮಾಲತಿ ಅವರಿಗೆ ಹಾಟ್ ಫ್ಲಾಸ್ಕ್, ರಾಜೇಶ್ ಅವರಿಗೆ ಎಲೆಕ್ಟ್ರಿಕ್ ಕೆಟಲ್ ಹಾಗೂ ದೀಪಕ್ ಅವರಿಗೆ ಕುಕ್ಕರ್ ಬಹುಮಾನವಾಗಿ ನೀಡಲಾಯಿತು.

ಶ್ರೀನಿವಾಸ್ ಕುಳಾಯಿ ನಿರೂಪಿಸಿದರು. ಸುರತ್ಕಲ್ ಶಾಖೆಯ ಮ್ಯಾನೇಜರ್ ಸಂತೋಷ್, ಸತೀಶ್, ವೀಣಾರಾವ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

slider