ಬೆದ್ರ ಅಡ್ವೆಂಚರ್ಸ್ ಕ್ಲಬ್- ತ್ರಿಭುವನ್ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ವಿಲೀನ: ಅಟೋ-ಎಕ್ಸ್ 2026 ಕೃತಜ್ಞತಾ ಸಭೆಯಲ್ಲಿ ಘೋಷಣೆ

BIDIRE NEWS

ಮೂಡುಬಿದಿರೆ: ಅಟೋ-ಎಕ್ಸ್  2026 ಮೂಡುಬಿದಿರೆ ಕಾರ್ಯಕ್ರಮದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ  ಗುರುವಾರ ಯಶಸ್ಸು ಹಾಗೂ ಕೃತಜ್ಞತಾ ಸಭೆ ಜರಗಿತು


ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರಾಯೋಜಕರು, ಮಾಧ್ಯಮ ಹಾಗೂ ಪತ್ರಿಕಾ ಪ್ರತಿನಿಧಿಗಳು, ಸಾಮಾಜಿಕ ಮಾಧ್ಯಮ ಇನ್‌ಫ್ಲೂಯೆನ್ಸರ್‌ಗಳು, ವಿಷಯ ಸೃಜನಶೀಲರು ಹಾಗೂ ವಿವಿಧ ವಿಭಾಗಗಳ ಸದಸ್ಯರಿಗೆ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು.

ಸಭೆಯಲ್ಲಿ ಮಹತ್ವದ ನಿರ್ಧಾರವಾಗಿ 2012ರಲ್ಲಿ ಸ್ಥಾಪನೆಯಾದ ಬೆದ್ರ ಅಡ್ವೆಂಚರ್ಸ್ ಕ್ಲಬ್ (BAC) ತನ್ನ ಎಲ್ಲಾ ಯುವ ಸದಸ್ಯರೊಂದಿಗೆ ತ್ರಿಭುವನ್ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ (TASC) ಜೊತೆಗೆ ವಿಲೀನಗೊಳ್ಳುವುದಾಗಿ ಘೋಷಿಸಲಾಯಿತು. ಮುಂದಿನ ದಿನಗಳಲ್ಲಿ ಎರಡೂ ಕ್ಲಬ್‌ಗಳು ಒಂದೇ ತಂಡವಾಗಿ ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಲಾಯಿತು.

ಹಿರಿಯ ಸದಸ್ಯರಾದ ಪ್ರತಾಪ್ ಅವರು BAC ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸಿ ಅಟೋ-ಎಕ್ಸ್  2026 ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಕುಲದೀಪ್ ಎಂ. ಅವರು TASC ಹಾಗೂ BAC ಒಗ್ಗೂಡಿ ಒಂದೇ ತಂಡವಾಗಿ ಕಾರ್ಯನಿರ್ವಹಿಸುವುದು ಮೂಡುಬಿದಿರೆಯ ಮೋಟಾರ್‌ಸ್ಪೋರ್ಟ್ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಅಬುಲ್ ಅಲಾ ಅವರು ಸಹ ಎಲ್ಲ ಬೆಂಬಲಿಗರು ಹಾಗೂ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದ ಅಭಿಜೀತ್ ಎಂ. ಅವರು ಎರಡೂ ಕ್ಲಬ್‌ಗಳನ್ನು ಅಧಿಕೃತವಾಗಿ ನೋಂದಣಿ ಮಾಡುವ ಉದ್ದೇಶವಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮೋಟಾರ್‌ಸ್ಪೋರ್ಟ್ ಸ್ಪರ್ಧೆಗಳನ್ನು ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಮೂಡುಬಿದಿರೆಯಲ್ಲಿ INRC ಲೆಗ್ ಆಯೋಜಿಸುವ ಕನಸನ್ನೂ ಅವರು ವ್ಯಕ್ತಪಡಿಸಿದರು.

ಸಭೆಯನ್ನು ನಿರೂಪಿಸಿದ ಅಕ್ಷಯ್ ಕೆ. ಜೈನ್ ಅವರು BAC–TASC ವಿಲೀನವನ್ನು ಅಧಿಕೃತವಾಗಿ ಘೋಷಿಸಿ, ರಾಷ್ಟ್ರೀಯ ಮಟ್ಟದ ಮೋಟಾರ್‌ಸ್ಪೋರ್ಟ್ ಕಾರ್ಯಕ್ರಮಗಳನ್ನು ಮೂಡುಬಿದಿರೆಯಲ್ಲಿ ನಡೆಸುವ ಮೂಲಕ ಇಲ್ಲಿನ ಮೋಟಾರ್‌ಸ್ಪೋರ್ಟ್ ಪರಂಪರೆಯನ್ನು ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು.

ಸಭೆಯಲ್ಲಿ ಎಲ್.ಆರ್. ರಿಜ್ವಾನ್, ಇಮ್ರಾನ್ ಮೂಡುಬಿದಿರೆ, ಆರಿಫ್, ಚಾ. ಗಫೂರ್, ಅರ್ಷಾದ್, ಯತಿರಾಜ್, ಧೀರಜ್, ಯಾಸೀರ್, ರಾಹುಲ್ ಹೆಗ್ಡೆ, ದೀಪಕ್, ಫಝೀಲ್, ಪವನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

slider