ಮೂಡುಬಿದಿರೆ: ವಿಜಯನಗರ ಲಾವಂತಬೆಟ್ಟು (ಅಮರಶ್ರೀ ಟಾಕೀಸ್ ಸಮೀಪ)ದಲ್ಲಿರುವ ಶ್ರೀ ಚಾಮುಂಡಿ–ಗುಳಿಗ ದೈವಸ್ಥಾನದಲ್ಲಿ ಹತ್ತನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಬುಧವಾರ ನಡೆಯಿತು.
ವೇದಮೂರ್ತಿ ಎಡಪದವು ವೆಂಕಟೇಶ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗಣಹೋಮ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪರ್ವಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು.
ದೈವಸ್ಥಾನದ ಅಧ್ಯಕ್ಷ ಚೌಟರ ಅರಮನೆಯ ಕುಲದೀಪ ಎಂ., ಅರ್ಚಕ ಸುಧಾಕರ ಭಟ್ ಸಹಿತ ಭಕ್ತರು ಉಪಸ್ಥಿತರಿದ್ದರು.





