ನಡೆಯದ ಅಕ್ರಮ-ಸಕ್ರಮ ಸಮಿತಿ ಸಭೆ: ಸಾವಿರಾರು ಅರ್ಜಿಗಳು ಬಾಕಿ, ಶಾಸಕರ ತುರ್ತು ಸ್ಪಂದನೆಗೆ ಒತ್ತಾಯ

BIDIRE NEWS

ಮೂಡುಬಿದಿರೆ: ಕಳೆದ ಕೆಲವು ವರ್ಷಗಳಿಂದ ಅಕ್ರಮ-ಸಕ್ರಮ ಮತ್ತು ಬಗರ್ ಹುಕುಂ ಸಮಿತಿ ಸಭೆಗಳು ನಡೆಯದೆ ಇರುವುದರಿಂದಾಗಿ ಸಾವಿರಾರು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಇದರಿಂದಾಗಿ ಬಡ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಈ ಬಗ್ಗೆ ಶಾಸಕರು ಕೂಡಲೇ ಸ್ಪಂದಿಸಬೇಕು ಎಂದು ತಾಲೂಕು ಅಕ್ರಮ-ಸಕ್ರಮ ಸಮಿತಿಯ ಸದಸ್ಯರಾದ ವಾಸುದೇವ ನಾಯಕ್ ಅವರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಉಮಾನಾಥ ಕೋಟ್ಯಾನ್ ಅವರ ಅವಧಿಯಲ್ಲಿ ಕೇವಲ ಮೂರು ಸಭೆಗಳು ಮಾತ್ರ ನಡೆದಿವೆ. ಆದರೆ, ಕಳೆದ ಎರಡು ವರ್ಷಗಳಿಂದ ಈ ಸಮಿತಿಯ ಸಭೆಯೇ ನಡೆದಿಲ್ಲ. ಪ್ರಸ್ತುತ ಫಾರಂ 50, ಫಾರಂ 53, ಮತ್ತು ಫಾರಂ 57ರ ಅಡಿಯಲ್ಲಿ ಸಾವಿರಾರು ಅರ್ಜಿಗಳು ಇತ್ಯರ್ಥವಾಗದೇ ಉಳಿದುಕೊಂಡಿವೆ. ಇದರಿಂದ ಭೂಮಿ ಮಂಜೂರಾತಿಗಾಗಿ ಕಾಯುತ್ತಿರುವ ಸಾವಿರಾರು ಕುಟುಂಬಗಳಿಗೆ ತೊಂದರೆಯಾಗಿದೆ," ಎಂದು ವಾಸುದೇವ ನಾಯಕ್ ಅವರು ಆತಂಕ ವ್ಯಕ್ತಪಡಿಸಿದರು.

ಬಾಕಿ ಉಳಿದಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸಮಿತಿ ಸಭೆಗಳನ್ನು ತುರ್ತಾಗಿ ಕರೆಯಬೇಕು. ಬಡವರ ಭೂ ಸಮಸ್ಯೆಗಳನ್ನು ಬಗೆಹರಿಸಲು ಶಾಸಕರು ಉಮಾನಾಥ ಕೋಟ್ಯಾನ್ ಅವರು ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಮಿತಯ ಸದಸ್ಯರಾದ ಕರುಣಾಕರ, ಮರಿಟಾ ಮೆನೇಜಸ್ ಸುದ್ದಿಗೋಷ್ಠಿಯಲ್ಲಿದ್ದರು.

slider