ಮೂಡುಬಿದಿರೆ: ಮೂಲತಃ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದವರಾದ ಧೀರೇಂದ್ರ ಬಲ್ಲಾಳ್ ಅವರು ಇಂಗ್ಲೆಂಡ್‌ನ ಪ್ರತಿಷ್ಠಿತ ಬಿಪಿಪಿ (BPP) ವಿಶ್ವವಿದ್ಯಾಲಯದಿಂದ (BPP University, England) ಮನೋವೈದ್ಯಕೀಯ ಶುಶ್ರೂಷೆಯಲ್ಲಿ (Mental Health Nursing) ವಿಜ್ಞಾನ ಪದವಿ ಪಡೆದಿದ್ದಾರೆ.
ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಹಾಲ್‌ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಅವರಿಗೆ ಪದವಿಯನ್ನು ಪ್ರದಾನ ಮಾಡಲಾಯಿತು.
ಪ್ರಸ್ತುತ, ಧೀರೇಂದ್ರ ಅವರು ರಾಯಲ್ ಹ್ಯಾಂಪ್‌ಷೈರ್ ಕೌಂಟಿ ಆಸ್ಪತ್ರೆಯಲ್ಲಿ (Royal Hampshire County Hospital) ಶುಶ್ರೂಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

