ಜಾರ್ಜ್ ಮೋನಿಸ್, ಅಭಿಜಿತ್ ಎಂ. ಅವರಿಗೆ ಎಂಸಿಎಸ್ ಸೊಸೈಟಿ 'ಸಹಕಾರ ಕಲ್ಪವೃಕ್ಷ' ಪ್ರಶಸ್ತಿ

BIDIRE NEWS

ಮೂಡುಬಿದಿರೆ:  ಪ್ರತಿಷ್ಠಿತ ಎಂಸಿಎಸ್ ಸೊಸೈಟಿ  ಕೊಡಮಾಡುವ ವಾರ್ಷಿಕ ಪ್ರಶಸ್ತಿಗಳಿಗೆ ಈ ಸಾಲಿನ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ಸೊಸೈಟಿಯ ಹಿರಿಯ ನಿರ್ದೇಶಕರಾದ ಜಾರ್ಜ್ ಮೋನಿಸ್ ಅವರು ಪ್ರತಿಷ್ಠಿತ 'ಸಹಕಾರ ಕಲ್ಪವೃಕ್ಷ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೂಡುಬಿದಿರೆಯ ಯುವ ಉದ್ಯಮಿ, ಪದ್ಮಶ್ರೀ ಏಜೆನ್ಸೀಸ್‌ನ ಮಾಲೀಕರಾದ ಅಭಿಜಿತ್ ಎಂ. ಅವರನ್ನು 'ಸಮಗ್ರ ಸಾಧಕ' ಪ್ರಶಸ್ತಿಯೊಂದಿಗೆ ಗೌರವಿಸಲು ಸೊಸೈಟಿ ತೀರ್ಮಾನಿಸಿದೆ.

ಸಹಕಾರ ಕ್ಷೇತ್ರದಲ್ಲಿ ಹಾಗೂ ಸಮುದಾಯದಲ್ಲಿ ಮಾಡಿದ ಉತ್ತಮ ಸೇವೆ ಮತ್ತು ಸಾಧನೆಗಳನ್ನು ಪರಿಗಣಿಸಿ ಈ ಇಬ್ಬರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.

ಈ ಗೌರವ ಪ್ರಶಸ್ತಿಗಳನ್ನು ಸೊಸೈಟಿ ಸಭಾ ಭವನದಲ್ಲಿ ನಡೆಯಲಿರುವ ಸಹಕಾರ ಸಪ್ತಾಹ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭದ ನಿಖರ ದಿನಾಂಕ ಮತ್ತು ಸಮಯವನ್ನು ಸೊಸೈಟಿ ಶೀಘ್ರದಲ್ಲೇ ಪ್ರಕಟಿಸಲಿದೆ.