ಜಿಲ್ಲಾಮಟ್ಟದ ಗುಡ್ಡಗಾಡು ಓಟ: ಆಳ್ವಾಸ್ ಪಿಯು ಕಾಲೇಜು ಚಾಂಪಿಯನ್

BIDIRE NEWS

ಮೂಡುಬಿದಿರೆ: ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಗುಡ್ಡಗಾಡು ಓಟದಲ್ಲಿ ಆಳ್ವಾಸ್ ಪಿಯು ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡವು ಎರಡೂ ವಿಭಾಗದಲ್ಲಿ ಚಾಂಪಿಯನ್ ಆಗಿದೆ. 

ಬಾಲಕರ ವಿಭಾಗದಲ್ಲಿ ಆಳ್ವಾಸ್‌ನ ಸಾಗರ್-ದ್ವಿತೀಯ, ವರುಣ್-ತೃತೀಯ, ಸಮರ್ಥ -ನಾಲ್ಕನೇ ಸ್ಥಾನ, ವಿನಯ್- ಐದನೇ ಸ್ಥಾನ ಪಡೆದುಕೊಂಡರು.ಬಾಲಕಿಯರ ವಿಭಾಗದಲ್ಲಿ ಆಳ್ವಾಸ್‌ನ ನಾಗಿಣಿ- ಪ್ರಥಮ, ಚರಿಷ್ಮಾ - ದ್ವಿತೀಯ, ಜಾಹ್ನವಿ - ತೃತೀಯ ಸ್ಥಾನ ಪಡೆದರು. 

ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

slider
Random Fade Slider