1 / 3
Caption Text
2 / 3
Caption Two
3 / 3
Caption Three

ಮೂಡುಬಿದಿರೆ ಕರಿಂಜೆ ಗ್ರಾಮದಲ್ಲಿ ವೈಬ್ರೆಂಟ್ ಜ್ಞಾನಕಾಶಿ ನ್ಯಾಷನಲ್ ಸ್ಕೂಲ್‌ಗೆ ಶಿಲಾನ್ಯಾಸ

BIDIRE NEWS
ಮೂಡುಬಿದಿರೆ: ಗಂಟಾಲ್ಕಟ್ಟೆ ಸಮೀಪದ ಕರಿಂಜೆ ಗ್ರಾಮದಲ್ಲಿ ವನಜಾಕ್ಷಿ ಎಜ್ಯುಕೇಶನ್ ಪೌಂಡೇಶನ್ ಹಾಗೂ ವೈಬ್ರೆಂಟ್ ಚಾರಿಟೇಬಲ್  ಟ್ರಸ್ಟ್
ವತಿಯಿಂದ ನಿರ್ಮಾಣಗೊಳ್ಳಲಿರುವ ವೈಬ್ರೆಂಟ್ ಜ್ಞಾನಕಾಶಿ ನ್ಯಾಷನಲ್ ಸ್ಕೂಲ್‌ಗೆ ಭಾನುವಾರ ಶಿಲಾನ್ಯಾಸ ನೆರವೇರಿಸಲಾಯಿತು. 







ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಪ್ರಕೃತಿಯಲ್ಲಿ ಯಾವಾಗ ಸಾತ್ವಿಕ ಶಕ್ತಿ ಜಾಗೃತವಾಗಿರುತದೋ ಆ ಸಂದರ್ಭವನ್ನು ಸುಮೂರ್ಹ ಎಂದು ಕರೆಯುತ್ತೇವೆ. ಶಿಕ್ಷಣವೆನ್ನುವುದು ಮನುಷ್ಯನ ಜೀವನದ ಬಹುಮುಖ್ಯ ಘಟ್ಟ. ಮಾನವ ಬುದ್ಧಿಗೆ ಶಿಕ್ಷಣದಿಂದಾಗಿ ಸ್ವರೂಪ ಬರುತ್ತದೆ. ಮಕ್ಕಳಿಗೆ ಒಳ್ಳೆಯ ರೀತಿಯ ಭವಿಷ್ಯ ರೂಪಿಸುವ ಕೆಲಸ ವೈಬ್ರೆಂಟ್ ಜ್ಞಾನಕಾಶಿ ಸಂಸ್ಥೆಯಿAದಾಗಲಿ ಎಂದು ನುಡಿದರು. 
ಕಟೀಲು ದೇವಳದ ಆನುವಂಶಿಕ ಅರ್ಚಕ ಲಕ್ಷ ನಾರಾಯಣ ಆಸ್ರಣ್ಣ, ಗಂಟಾಲ್ಕಟ್ಟೆ ಚರ್ಚ್ ಧರ್ಮಗುರು ರೆ.ಫಾ ರೋನಲ್ಡ್ ಪ್ರಕಾಶ್ ಡಿಸೋಜ, ಗಂಟಾಲ್ಕಟೆ ಮಸೀದಿಯ ಧರ್ಮಗುರು ಬಶೀರ್ ಧಾರಿಮಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಡಾ.ಅಮರಶ್ರೀ ಅಮರನಾಥ ಶೆಟ್ಟಿ, ಶ್ರೀಕ್ಷೇತ್ರ ಪಡ್ಯಾರಬೆಟ್ಟುವಿನ ಧರ್ಮದರ್ಶಿ ಎ.ಜೀವಂಧರ್ ಕುಮಾರ್, ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ಕರಿಂಜೆಗುತ್ತು ಕೆ.ಕೃಷ್ಣರಾಜ್ ಹೆಗ್ಡೆ, ಯುಗಪುರುಷ ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಬ್ಯಾಂಕಿನ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ., ಉದ್ಯಮಿ ತಿಮ್ಮಯ್ಯ ಶೆಟ್ಟಿ, ಕೆ.ಪಿ ಜಗದೀಶ್ ಅಧಿಕಾರಿ ಶಿಕ್ಷಣ ಸಂಸ್ಥೆಗೆ ಶುಭ ಕೋರಿದರು. 
ವನಜಾಕ್ಷಿ ಎಜ್ಯುಕೇಶನ್ ಫೌಂಡೇಶನ್ ಸಂಸ್ಥಾಪಕ ಕೆ.ಶ್ರೀಪತಿ ಭಟ್, ಟ್ರಸ್ಟಿಗಳಾದ ಬಲರಾಮ ಕೆ.ಎಸ್, ಬಾಲಕೃಷ್ಣ ಭಟ್, ಶ್ರೀನಿವಾಸ ಭಟ್, ದೀಪ್ತಿ ಬಾಲಕೃಷ್ಣ ಭಟ್, ವೈಬ್ರೆಂಟ್ ಪಿಯು ಕಾಲೇಜಿನ ಟ್ರಸ್ಟಿಗಳಾದ ಡಾ.ಎಸ್.ಎನ್ ವೆಂಕಟೇಶ್ ನಾಯಕ್, ಡಾ.ಶರತ್ ಗೋರೆ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬಡೆಕರ್, ಮೆಹಬೂಬ್ ಬಾಷಾ ಮತ್ತಿತರಿಭಾನುವಾರ