ಮೂಡುಬಿದಿರೆ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂಡುಬಿದಿರೆ ಪಡುಮಾರ್ನಾಡು ಶ್ಯಾಮ ಅಂಚನ್ ಅವರ ಪುತ್ರ ಸಾತ್ವಿಕ ಕುಲಾಲ್‌ಗೆ ಕುಲಾಲ ಸಂಘ ಮೂಡುಬಿದಿರೆ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ಸಂಘದ ವತಿಯಿಂದ ಹಮ್ಮಿಕೊಂಡಿದ್ದ 'ತುರ್ತು ಆರೋಗ್ಯ ನಿಧಿ' ಯೋಜನೆಯಡಿ ದಾನಿಗಳಿಂದ ಸಂಗ್ರಹಿಸಲಾದ ರೂ. 21,000 ಮೊತ್ತವನ್ನು ಫಲಾನುಭವಿಯ ಮನೆಗೆ ಭೇಟಿ ನೀಡಿ ಹಸ್ತಾಂತರಿಸಲಾಯಿತು.
ಸಂಘದ ಅಧ್ಯಕ್ಷರಾದ ಸತೀಶ್ ಕುಲಾಲ್ ಏರಿಮಾರು, ಕಾರ್ಯದರ್ಶಿ ವಿಶ್ವನಾಥ್ ಕುಲಾಲ್, ಮಹಿಳಾ ಘಟಕದ ಕಾರ್ಯದರ್ಶಿ ಮಮತಾ ಕುಲಾಲ್, ಸದಸ್ಯರಾದ ವೆಂಕಟೇಶ್ ಬಂಗೇರ, ವಿಜಯ್ ಕುಮಾರ್, ಸೀತಾರಾಮ ಕುಲಾಲ್, ಸಂಪಾ ಸದಾಶಿವ ಮೂಲ್ಯ ಉಪಸ್ಥಿತರಿದ್ದರು.

