ಮೂಡುಬಿದಿರೆ: ಉಡುಪಿಯ ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು `ವಿಕಾಸ'- ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ, ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ ಆರರಂದು `ಕರಾವಳಿ ವಿಕಾಸ ಸಂಭ್ರಮ 2025' ಸಮಾವೇಶದಲ್ಲಿ ಕೊಡಮಾಡುವ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಮೂಡುಬಿದಿರೆ ತಾಲೂಕಿನ ಮೂವರು ಪತ್ರಕರ್ತರು ಆಯ್ಕೆಯಾಗಿದ್ದಾರೆ.
ಮೂಡುಬಿದಿರೆ ಅಶ್ವತ್ಥಪುರ ಮೂಲದ ಕಿರಣ್ ಮಂಜನಬೈಲು, ದ.ಕ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕರಣಿ ಸದಸ್ಯ ಹರೀಶ್ ಕೆ.ಅದೂರು ಹಾಗೂ ಹಿರಿಯ ಪತ್ರಕರ್ತ ಡಾ.ಮಂದಾರ ರಾಜೇಶ್ ಭಟ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

