ಅಲಂಗಾರಿನಲ್ಲಿ ಕಾರು ಡಿಕ್ಕಿ: ಬೈಕ್ ಸವಾರಗೆ ಗಂಭೀರ ಗಾಯ

BIDIRE NEWS

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಅಲಂಗಾರು ಗೋಲ್ಡನ್ ಗೇಟ್ ಹೋಟೆಲ್ ಬಳಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ದರೆಗುಡ್ಡೆ ಗ್ರಾಮದ ವೀರೇಂದ್ರ ಎನ್. ಪೂಜಾರಿ ಗಾಯಗೊಂಡವರು. ಅವರು ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆಗೆ, ನೋಂದಣಿಯ ವಾಹನದಲ್ಲಿ ವಾಮಾಂಜೂರಿನಿಂದ ಮನೆ ಕಡೆಗೆ ಹೋಗುತ್ತಿದ್ದರು. ಅದೇ ಸಮಯದಲ್ಲಿ, ರಾಜೇಶ್ ಎಂಬುವವರು  ಕಾರನ್ನು ಅಲಂಗಾರುವಿನ ಗೋಲ್ಡನ್ ಗೇಟ್ ಹೋಟೆಲ್ ಬಳಿ ತೀರಾ ವೇಗ ಮತ್ತು ಅಜಾಗರೂಕತೆಯಿಂದ, ಯಾವುದೇ ಮುನ್ಸೂಚನೆ ನೀಡದೆ, ರಸ್ತೆಯ ಎಡಭಾಗದಲ್ಲಿ ಚಲಾಯಿಸಿಕೊಂಡು ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯ ಪರಿಣಾಮದಿಂದ ವೀರೇಂದ್ರ ಪೂಜಾರಿಯವರು ರಸ್ತೆಗೆ ಎಸೆಯಲ್ಪಟ್ಟು ಅವರ ಎಡ ಭುಜದ ಮೂಳೆ (Shoulder bone) ಮುರಿದಿದೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಸಂಬಂಧ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.