ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದೊಂದಿಗೆ, ಶ್ರೀ ಧವಲಾ ಕಾಲೇಜು ಮೂಡುಬಿದಿರೆ ವತಿಯಿಂದ ಡಿಸೆಂಬರ್ 5ರಿಂದ ಡಿಸೆಂಬರ್ 11ರವರೆಗೆ, ವೇಣೂರಿನ ಮೂಡಕೋಡಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.
ಪ್ರತಿ ದಿನವೂ ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಶಿಬಿರಕ್ಕೆ ಸಿದ್ಧತೆ ಹಾಗೂ ಸ್ಥಳೀಯ ಸಮೀಕ್ಷೆ ನಡೆಯಲಿದ್ದು, ಸಂಜೆ ಶ್ರಮದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದ ಉದ್ಘಾಟನಾ ಕಾರ್ಯಕ್ರಮ ಡಿಸೆಂಬರ್ 5ರಂದು 3:30 ಕ್ಕೆ ನಡೆಯಲಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಶಾಸಕರು ಶಿಬಿರ ಹಾಗೂ ಡಿ.ಜೆ.ವಿ. ಸಂಘದ ಕಾರ್ಯದರ್ಶಿ ಅಭಿಜಿತ್ ಎಂ. ಶ್ರಮದಾನ ಉದ್ಘಾಟಿಸುವರು. ಪ್ರಾಂಶುಪಾಲ ಪ್ರೊ. ಪಾಶ್ವನಾಥ ಅಜಿರಿ ಅಧ್ಯಕ್ಷತೆವಹಿಸುವರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖ್ಯಸ್ಥರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು:
ಶಿಬಿರದ ದಿನಗಳಲ್ಲಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮತ್ತು ಸಂಜೆ 6:30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿಬಿರದ ಸಮಾರೋಪ ಸಮಾರಂಭವು ಡಿಸೆಂಬರ್ 11, 2025, ಗುರುವಾರ, ಅಪರಾಹ್ನ 2:00 ಕ್ಕೆ ನಡೆಯಲಿದೆ. ಪ್ರಾಂಶುಪಾಲ ಪ್ರೊ. ಪಾಶ್ವನಾಥ ಅಜಿರಿ ಅಧ್ಯಕ್ಷತೆವಹಿಸಲಿದ್ದು, ಡಿಜೆವಿವಿ ಸಂಘದ ಸಂಚಾಲಕ ಕೆ. ಹೇಮರಾಜ್ ಅಧ್ಯಕ್ಷತೆವಹಿಸುವರು. ಸ್ಥಳೀಯ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು ಎಂದು ಎನ್.ಎಸ್.ಎಸ್ ಯೋಜನಾಧಿಕಾರಿ ಮಲ್ಲಿಕಾ ತಿಳಿಸಿದ್ದಾರೆ.

